ವಿಶ್ವಸಂಸ್ಥೆ, ಲಂಡನ್: ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳದಿದ್ದರೆ ಹವಾಮಾನ ವೈಪರೀತ್ಯದಿಂದಾಗಿ ಮುಂದಿನ 30 ವರ್ಷಗಳಲ್ಲಿ (2030 ರಿಂದ 2052ರವರೆಗೆ) ಭೂಮಿಯ ತಾಪಮಾನ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಲಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.
ಕಳೆದ ವಾರ ದಕ್ಷಿಣ ಕೊರಿಯಾದ ಇಂಚಿಯೋನ್ನಲ್ಲಿ ನಡೆದ ಹವಾಮಾನ ವೈಪರೀತ್ಯದ ಕುರಿತ ಅಂತರ ಸರ್ಕಾರಿ ಸಮಿತಿಯ (IPCC) ಸಭೆಯಲ್ಲಿ ವರದಿಯನ್ನು ಅಂತಿಮಗೊಳಿಸಲಾಗಿದೆ. 2015ರಲ್ಲಿ ಜಾಗತಿಕ ತಾಪಮಾನ ಏರಿಕೆ ತಡೆಯಲು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ತಾಪಮಾನ ಹೆಚ್ಚಳದ ಕುರಿತು ವರದಿ ನೀಡುವಂತೆ ಮನವಿ ಮಾಡಿದ್ದವು. ಅದರಂತೆ ಐಪಿಸಿಸಿ ಸಮಿತಿಯು ತಾಪಮಾನ ಏರಿಕೆ ಕುರಿತು ತನ್ನ ವರದಿಯನ್ನು ವಿಶ್ವಸಂಸ್ಥೆಗೆ ನೀಡಿದೆ.
1800ರ ಮಧ್ಯಭಾಗದಿಂದ ಕಾರ್ಖಾನೆಗಳು ಮತ್ತು ವಾಹನಗಳಿಂದ ಹೊರಹೊಮ್ಮಿದ ಕಾರ್ಬನ್ ಡೈಆಕ್ಸೈಡ್ನಿಂದಾಗಿ ಭೂಮಿಯ ಮೇಲೆ ಸರಾಸರಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಪ್ರಸ್ತುತ ತಾಪಮಾನ ಹೆಚ್ಚುತ್ತಿರುವ ಪ್ರಮಾಣವನ್ನು ಗಮನಿಸಿದರೆ, 2030 ರಿಂದ 2052ರ ಒಳಗೆ ತಾಪಮಾನ 1.5 ಡಿಗ್ರಿ ಸೆಲ್ಸಿಯನ್ ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ