ಬದಲಾಗುತ್ತಿರುವ ಹವಾಮಾನವು ಮದ್ಯ ತಯಾರಿಕೆ ಮೇಲೆ ಪ್ರತಿಕೂಲ ಪರಿಣಾಮ
ಬೀರಲಿದ್ದು, ಮುಂದಿನ ದಿನಗಳಲ್ಲಿ ಬಿಯರ್ ಡ್ರಿಂಕ್ ಕೊರತೆ ಎದುರಾಗಲಿದೆ. ಇದರಿಂದ ಮದ್ಯದ
ದರ ಏರಿಕೆಯಾಗಲಿದ್ದು, ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗಲಿದೆ ಎಂದು ಹೊಸ ಸಂಶೋಧನೆಯಲ್ಲಿ
ಬಹಿರಂಗವಾಗಿದೆ.
ಭೂಮಂಡಲದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಉಷ್ಣಾಂಶ ಹಾಗೂ ಬರಗಾಲವೂ ಜಾಗತಿಕ ಬೆಳೆಯಾದ
ಬಾರ್ಲಿ ಮೇಲೆ ಹಾನಿಯುಂಟು ಮಾಡುತ್ತಿದೆ. ಬಾರ್ಲಿ, ಮದ್ಯಪಾನ ತಯಾರಿಕೆಯಲ್ಲಿ ಸಾಮಾನ್ಯವಾಗಿ
ಬಳಸುವಂತಹ ಪದಾರ್ಥವಾಗಿದೆ. ಮದ್ಯ ತಯಾರಿಕೆಯ ಪ್ರಮುಖ ರಾಷ್ಟ್ರಗಳಾದ ಬೆಲ್ಜಿಯಂ, ಜೆಕ್
ರಿಪಬ್ಲಿಕ್ ಹಾಗೂ ಐರ್ಲೆಂಡ್ ಸೇರಿದಂತೆ ಇನ್ನಿತರ ರಾಷ್ಟ್ರಗಳ ಮೇಲೆ ಹವಾಮಾನ ಬದಲಾವಣೆ
ಪರಿಣಾಮ ಬೀರಲಿದೆ.
ಜಾಗತಿಕ ಉಷ್ಣಾಂಶದಿಂದ ಪ್ರವಾಹ ಹಾಗೂ ಚಂಡಮಾರುತದಂತಹ ಅನೇಕ ಜೀವ ಕಂಟಕ ಘಟನೆಗಳು
ನಡೆಯುತ್ತಿವೆ. ಇದು ಸಾಕಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಮಧ್ಯೆ ಬಿಯರ್ ಕೊರತೆ
ಮುಖ್ಯವಲ್ಲ ಎಂದಾದರೂ, ಅನೇಕ ಜನರ ಜೀವನದ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಸಂಶೋಧಕರು
ತಿಳಿಸಿದ್ದಾರೆ. *(ಏಜೆನ್ಸೀಸ್)*

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ