ನವದೆಹಲಿ: ವಿಚ್ಛೇಧಿತ ಪುರುಷನು ಬೇರೊಂದು ಮದುವೆಯಾದರೂ ಮಕ್ಕಳ ಸುಪರ್ದಿಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚ್ಛೇಧಿತ ಪತಿಯ ಸುಪರ್ದಿಯಿಂದ ಮಕ್ಕಳನ್ನು ವಾಪಸ್ ಕೊಡಿಸುವಂತೆ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ.
ಮುಂಬೈನ ವೈದ್ಯ ದಂಪತಿ 2016ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆದಿದ್ದರು. ಮಕ್ಕಳನ್ನು ಪತಿಯ ಸುಪರ್ದಿಗೆ ಕೊಡಲಾಗಿತ್ತು. ಇಬ್ಬರೂ ಸರ್ಕಾರಿ ನೌಕರಿಯಲ್ಲಿ ಇದ್ದ ಕಾರಣ ಮಗಳ ಶೈಕ್ಷಣಿಕ ಮತ್ತು ವೈವಾಹಿಕ ವೆಚ್ಚದ ಒಂದು ಭಾಗವನ್ನು ಪತ್ನಿಯೂ ಭರಿಸಬೇಕು ಎಂದು ಸ್ಥಳೀಯ ನ್ಯಾಯಾಲಯ ಹೇಳಿತ್ತು.
ಇದರ ಮಧ್ಯೆಯೇ ವಿಚ್ಚೇಧಿತ ಪತಿಯು ಬೇರೊಂದು ಮದುವೆ ಮಾಡಿಕೊಂಡಿದ್ದರು. ಆಗ ಅವರ ಮೊದಲ ಪತ್ನಿಯು ಬಾಂಬೆ ಹೈಕೋರ್ಟ್‌ನ ಮೊರೆ ಹೋಗಿ, ಮಕ್ಕಳನ್ನು ತನ್ನ ಸುಪರ್ದಿಗೆ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಹೈಕೋರ್ಟ್ ಅದನ್ನು ಮಾನ್ಯ ಮಾಡಿತ್ತು. ಆ ತೀರ್ಪಿನ ವಿರುದ್ಧ ಪತಿಯು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
‘ಆ ವ್ಯಕ್ತಿಯು ಮರುಮದುವೆ ಮಾಡಿಕೊಂಡಿದ್ದರೂ ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಎರಡನೇ ಪತ್ನಿ ಉದ್ಯೋಗದಲ್ಲಿ ಇದ್ದರೂ, ಮಕ್ಕಳನ್ನು ನೋಡಿಕೊಳ್ಳಲು ಎಂದೇ ರಾಜೀನಾಮೆ ನೀಡಿದ್ದಾರೆ. ಆದರೆ ವಿಚ್ಛೇಧಿತ ಪತ್ನಿಯು ಮಗಳ ಶೈಕ್ಷಣಿಕ ವೆಚ್ಚವನ್ನು ಭರಿಸಿಲ್ಲ. ಬದಲಿಗೆ ಅವರು ಬೇರೊಬ್ಬ ವ್ಯಕ್ತಿಗೆ ಭಾರಿ ಪ್ರಮಾಣದ ಹಣವನ್ನು ನೀಡುತ್ತಲೇ ಇದ್ದಾರೆ. ಹೀಗಾಗಿ ಮಕ್ಕಳನ್ನು ಆ ಮಹಿಳೆಯ ಸುಪರ್ದಿಗೆ ನೀಡಲಾಗದು’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ