ಐಟಿ ಉದ್ಯೋಗಿಗಳು ಮತ್ತು ಕಂಪನಿಗಳನ್ನು ಸಮಾಜಸೇವೆಯತ್ತ ಸೆಳೆಯಲು ಅನುವಾಗುವಂತೆ ಆರಂಭಿಸಲಾಗಿರುವ ಮೈ ನಹೀ ಹಮ್ (ನಾನು ಅಲ್ಲ ನಾವು) ಎಂಬ ಆಪ್ ಮತ್ತು ವೆಬ್ಸೈಟ್ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದರು.
ಸಮಾಜದ ದುರ್ಬಲ ವರ್ಗದವರ ಏಳಿಗೆಗೆ ಶ್ರಮಿಸಲು ವಿಶೇಷವಾಗಿ ಅವರಿಗೆ ಅತ್ಯಾಧುನಿಕ ತಂತ್ರಜ್ಞಾನದ ಅನುಕೂಲಗಳನ್ನು ತಲುಪಿಸಲು ಐಟಿ ಉದ್ಯೋಗಿಗಳು ಮತ್ತು ಕಂಪನಿಗಳನ್ನು ಒಂದೇ ವೇದಿಕೆಗೆ ಕರೆತರುವುದು ಇದರ ಉದ್ದೇಶ. ಜತೆಗೆ ಸಮಾಜದ ಏಳಿಗೆಗೆ ಕೆಲಸ ಮಾಡುವ ಬಯಕೆ ಹೊಂದಿರುವವರಿಗೆ ಅಗತ್ಯ ಉತ್ತೇಜನ ದೊರೆಯುವಂತೆ ಇದು ಮಾಡಲಿದೆ. ನಂತರ ಮೋದಿ ನಡೆಸಿದ ವಿಡಿಯೋ ಸಂವಾದದಲ್ಲಿ ರಾಷ್ಟ್ರದಾದ್ಯಂತ ಅಂದಾಜು 100ಕ್ಕೂ ಹೆಚ್ಚು ತಾಣಗಳಲ್ಲಿ ಐಟಿ ವೃತ್ತಿಪರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾರತದ ಯುವಜನರು ತಂತ್ರಜ್ಞಾನದ ಬಲವನ್ನು ತಮ್ಮ ಅಗತ್ಯಗಳಿಗೆ ಬಳಸಿಕೊಳ್ಳುವ ಜತೆಗೆ, ಇತರರ ಕ್ಷೇಮಾಭಿವೃದ್ಧಿಗೂ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು.
ಸುಧಾಮೂರ್ತಿಗೆ ಶ್ಲಾಘನೆ
ಇನ್ಪೋಸಿಸ್ ಫೌಂಡೇಷನ್ನಿನಿಂದ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯ ಹಾಗೂ ತಮ್ಮ ಲೇಖನಿಯಿಂದ ಅನೇಕರಿಗೆ ಪ್ರೇರಣೆ ನೀಡುತ್ತಿದ್ದೀರಿ ಎಂದು ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ಮೋದಿ ಶ್ಲಾಘಿಸಿದರು. ವಿಡಿಯೋ ಸಂವಾದದಲ್ಲಿ ಸುಧಾಮೂರ್ತಿ ಭಾಗವಹಿಸಿ ಸಂಸ್ಥೆಯ ಮೂಲಕ ಕೈಗೊಳ್ಳುತ್ತಿರುವ ಕಾರ್ಯವನ್ನು ವಿವರಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ