ದೇಶದ ರಕ್ಷಣಾ ವ್ಯವಸ್ಥೆಯ ಬಲವರ್ಧನೆಗೆ ಮಹತ್ವದ್ದು ಹಾಗೂ ಅಮೆರಿಕ ಜತೆಗಿನ ಬಾಂಧವ್ಯಕ್ಕೆ ನಿರ್ಣಾಯಕ ಎಂದೇ ವಿಶ್ಲೇಷಿಸಲಾಗುತ್ತಿರುವ ಭಾರತ-ರಷ್ಯಾ ನಡುವಿನ ಎಸ್-400 ಟ್ರಯಂಫ್ ಕ್ಷಿಪಣಿ ಒಪ್ಪಂದಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಗುರುವಾರದಿಂದ ಎರಡು ದಿನ ಭಾರತ ಪ್ರವಾಸ ಕೈಗೊಳ್ಳಲಿರುವ ರಷ್ಯಾ ಪ್ರಧಾನಿ ವ್ಲಾದಿಮಿರ್ ಪುತಿನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ 36,668 ಕೋಟಿ ರೂ. (5 ಬಿಲಿಯನ್ ಡಾಲರ್) ಮೊತ್ತದ ಈ ಒಪ್ಪಂದಕ್ಕೆ ಅಂಕಿತ ಹಾಕಲಿದ್ದಾರೆ. ರಷ್ಯಾ ಅಧ್ಯಕ್ಷರ ಕಾರ್ಯಾಲಯ ಈ ವಿಷಯವನ್ನು ಖಚಿತಪಡಿಸಿದೆ. ಉಭಯ ನಾಯಕರ 19ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆೆಯಲ್ಲಿ ರಕ್ಷಣಾ ತಾಂತ್ರಿಕ ಸಹಕಾರದ ವಿಷಯವೇ ಪ್ರಧಾನವಾಗಿ ಚರ್ಚೆಯಾಗಲಿದ್ದು, ಎಸ್- 400 ಕ್ಷಿಪಣಿ ಖರೀದಿ ಸೇರಿ ಮಹತ್ವದ ಒಪ್ಪಂದಗಳು ಏರ್ಪಡಲಿವೆ ಎಂದು ಪುತಿನ್ರ ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ.
ಅಮೆರಿಕ ಎಚ್ಚರಿಕೆ: ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎಂಬ ಕಾರಣಕ್ಕೆ ಆ ದೇಶದ ಜತೆ ರಕ್ಷಣಾ ವ್ಯವಹಾರ ನಡೆಸುವ ರಾಷ್ಟ್ರಗಳ ವಿರುದ್ಧ ನಿರ್ಬಂಧ ಹೇರುವ ಸಿಎಎಟಿಎಸ್ಎ ಕಾಯ್ದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ನಲ್ಲಿ ಸಹಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಯಂಫ್ ಕ್ಷಿಪಣಿ ಖರೀದಿ ಕೈಬಿಡದಿದ್ದಲ್ಲಿ ದೊಡ್ಡ ಮಟ್ಟದಲ್ಲೆ ನಿರ್ಬಂಧಗಳಿಗೆ ಗುರಿಯಾಗಬೇಕಾದೀತೆಂದು ಈಗಾಗಲೇ ಅಮೆರಿಕ ಎಚ್ಚರಿಕೆ ನೀಡಿರುವುದರಿಂದ ಈ ಒಪ್ಪಂದದ ವಿಚಾರ ಕುತೂಹಲ ಕೆರಳಿಸಿದೆ. ಟ್ರಯಂಫ್ ಕ್ಷಿಪಣಿ ಖರೀದಿ ವಿಷಯದಲ್ಲಿ ಬಿಗಿ ನಿಲುವನ್ನು ಸಡಿಲಿಸಬೇಕು ಎಂದು ಕಳೆದ ತಿಂಗಳು ನಡೆದ ಭಾರತ- ಅಮೆರಿಕಗಳ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಯಲ್ಲೂ ಕೋರಲಾಗಿತ್ತು. ಆದರೆ, ಅಮೆರಿಕ ಖಚಿತ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.
ಭಾರತಕ್ಕೆ ಉಭಯ ಸಂಕಟ: ರಷ್ಯಾ ಭಾರತದ ಹಳೆಯ ನೆಚ್ಚಿನ ಗೆಳೆಯ. ಭಾರತದ ಮಿಲಿಟರಿ ಸಾಧನ- ಸಲಕರಣೆ, ತಂತ್ರಜ್ಞಾನಗಳಲ್ಲಿ ಅಂದಾಜು ಶೇ. 60 ರಷ್ಯಾದಿಂದಲೇ ಬರುತ್ತದೆ. ಕಷ್ಟಕಾಲದಲ್ಲಿ ವಿಶ್ವ ಸಮುದಾಯದ ಮುಂದೆ ಭಾರತದ ಪರ ನಿಂತುಕೊಂಡ ಕಮ್ಯೂನಿಸ್ಟ್ ರಾಷ್ಟ್ರ. ಹೀಗಾಗಿ ರಷ್ಯಾದ ಜತೆಗಿನ ಮೈತ್ರಿಯನ್ನು ಅದೇ ಓಘದಲ್ಲಿ ಮುಂದುವರಿಸುವುದು ಭಾರತಕ್ಕೆ ಅನಿವಾರ್ಯ. ಇದೇ ವೇಳೆ ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ಜತೆ ಸುಧಾರಿಸಿರುವ ಸ್ನೇಹವನ್ನು ರಷ್ಯಾದ ವಿಷಯವಾಗಿ ಬಲಿಕೊಡಲು ಆಗದ ಪರಿಸ್ಥಿತಿ. ಹೀಗೆ ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳ ಆಪ್ತಬಳಗದಲ್ಲಿ ಇರಲು ಬಯಸುತ್ತಿರುವ ಭಾರತಕ್ಕೆ ಟ್ರಯಂಫ್ ಕ್ಷಿಪಣಿ ಖರೀದಿ ನಿಜಕ್ಕೂ ಅಗ್ನಿಪರೀಕ್ಷೆಯೇ ಸರಿ.
ಮಿಗ್-21 ಜೆಟ್ 3 ವಿಮಾನ ಉಡುಗೊರೆ: ಶೀತಲ ಸಮರ ಮತ್ತು ಅಲಿಪ್ತ ಚಳವಳಿ ಸಮಯದಲ್ಲಿ ಆಗಿನ ಯುಎಸ್ಎಸ್ಆರ್ನಿಂದ ಖರೀದಿಸಿದ್ದ ಮಿಗ್-21 ಸೂಪರ್ಸಾನಿಕ್ ಯುದ್ಧ ವಿಮಾನಗಳ ಪೈಕಿ ಮೂರು ಜೆಟ್ಗಳನ್ನು ರಷ್ಯಾ ಅಧ್ಯಕ್ಷ ಪುತಿನ್ಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಲಿದ್ದಾರೆ ಎನ್ನಲಾಗಿದೆ.
ಸರಿದ ವಿಘ್ನ
ನೆಲದಿಂದ ನಭಕ್ಕೆ ಹಾರಿ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯದ ‘ಎಸ್- 400 ಟ್ರಯಂಫ್’ ಸಂಚಾರಿ ಕ್ಷಿಪಣಿಯನ್ನು (ನ್ಯಾಟೋ ಇದನ್ನು ಗ್ರೋಲರ್ ಎಸ್ಎ-21 ಕ್ಷಿಪಣಿ ಎಂದು ಹೇಳುತ್ತದೆ) ರಷ್ಯಾದಿಂದ ಖರೀದಿಸಲು ಭಾರತ 2015ರಿಂದ ಮಾತುಕತೆ ನಡೆಸಿತ್ತು. ಆದರೆ, ಅನೇಕ ಅಡೆತಡೆಗಳ ಕಾರಣ ಒಪ್ಪಂದ ಏರ್ಪಟ್ಟಿರಲಿಲ್ಲ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ