ಸ್ಟಾಕ್ಹೋಮ್: ಭೌತವಿಜ್ಞಾನ ಕ್ಷೇತ್ರದಲ್ಲಿ ಮೂವರಿಗೆ ಜಂಟಿಯಾಗಿ ನೊಬೆಲ್ ಪ್ರಶಸ್ತಿ ಘೋಷಿಸಿದ್ದ ಸ್ವೀಡನ್ ಅಕಾಡೆಮಿ, ಈಗ ರಸಾಯನಶಾಸ್ತ್ರದಲ್ಲೂ ಮೂವರಿಗೆ ನೊಬೆಲ್ ಪುರಸ್ಕಾರವನ್ನು ಪ್ರಕಟಿಸಿದೆ. ಅಮೆರಿಕದ ವಿಜ್ಞಾನಿಗಳಾದ ಫ್ರಾನ್ಸೆಸ್ ಅರ್ನಾಲ್ಡ್, ಜಾರ್ಜ್ ಸ್ಮಿತ್ ಹಾಗೂ ಬ್ರಿಟನ್ ಸಂಶೋಧಕ ಗ್ರೆಗೊರಿ ವಿಂಟರ್ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಮೂವರು ವಿಜ್ಞಾನಿಗಳು ಜೈವಿಕ ಇಂಧನದಲ್ಲಿ ಉತ್ಪತ್ತಿಯಾಗುವ ಕಿಣ್ವಗಳನ್ನು ಔಷಧವಾಗಿ ಬಳಕೆ ಮಾಡುವ ತತ್ವವನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಔಷಧ ಕ್ಷೇತ್ರ ಮತ್ತು ಮಾನವನ ಆರೋಗ್ಯ ಸುಧಾರಣೆಗೆ ದೊಡ್ಡ ಕೊಡುಗೆಯಾಗಲಿದೆ ಎಂದು ಪ್ರಶಸ್ತಿಯ ಆಯ್ಕೆ ಸಮಿತಿ ತಿಳಿಸಿದೆ.
ಪ್ರಶಸ್ತಿ ಮೊತ್ತ -ಠಿ; 7.40 ಕೋಟಿ (1.01 ಮಿಲಿಯನ್ ಡಾಲರ್)ಯಲ್ಲಿ ಅರ್ಧ ಪಾಲನ್ನು ಫ್ರಾನ್ಸೆಸ್ ಪಡೆಯಲಿದ್ದಾರೆ. ಉಳಿದರ್ಧದಲ್ಲಿ ಮೊತ್ತವನ್ನು ಜಾರ್ಜ್ ಮತ್ತು ಗ್ರೆಗೂರಿಗೆ ಸಮಾನವಾಗಿ ಹಂಚಿಕೆಯಾಗಲಿದೆ.
ಐದನೇ ಮಹಿಳೆ
ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆಯುತ್ತಿರುವ ಐದನೇ ಮಹಿಳೆ ಎಂಬ ಶ್ರೇಯವನ್ನು ಫ್ರಾನ್ಸೆಸ್ ತಮ್ಮದಾಗಿಸಿಕೊಂಡಿದ್ದಾರೆ. ಭೌತವಿಜ್ಞಾನದ ಪ್ರಶಸ್ತಿಗೆ ಡೊನ್ನಾ ಸ್ಟ್ರಿಕ್ಲೆಂಡ್ರನ್ನು ಮಂಗಳವಾರ ಆಯ್ಕೆ ಮಾಡಲಾಗಿತ್ತು. ಈ ಮೂಲಕ ಎರಡು ದಿನಗಳಲ್ಲಿ ಇಬ್ಬರು ಮಹಿಳೆಯರು ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಸ್ಮಿತ್, ವಿಂಟರ್ ಸಾಧನೆ
ಬ್ಯಾಕ್ಟೀರಿಯೊಫೇಜ್ ಎಂಬ ವೈರಾಣು ಹೊಸ ರೀತಿಯ ಪ್ರೋಟೀನ್ ಉತ್ಪಾದಿಸುವುದನ್ನು ಎಲಿಗಂಟ್ ವಿಧಾನದ ಮೂಲಕ ಆವಿಷ್ಕಾರಿಸಿದ್ದಾರೆ. ಇದರಿಂದ ಔಷಧ ವಿಜ್ಞಾನ ಕ್ಷೇತ್ರಕ್ಕೆ ಬಹಳ ಪ್ರಯೋಜನ ಇದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ