ಸ್ಟಾಕ್ಹೋಮ್: ಮಾರಣಾಂತಿಕ ಕ್ಯಾನ್ಸರ್ ರೋಗಕ್ಕೆ ಚೆಕ್ಪಾಯಿಂಟ್ ಥೆರಪಿ ಸಂಶೋಧಿಸಿದ ಜೇಮ್್ಸ ಅಲಿಸನ್ ಹಾಗೂ ತಸುಕು ಹೊಂಜೋ ಅವರಿಗೆ 2018ನೇ ಸಾಲಿನ ವೈದ್ಯಕೀಯ ನೊಬೆಲ್ ಘೋಷಿಸಲಾಗಿದೆ.
ಅಮೆರಿಕದ ಅಲಿಸನ್ ಹಾಗೂ ಜಪಾನ್ನ ಹೊಂಜೋ ಅವರು ಕ್ಯಾನ್ಸರ್ ವಿರುದ್ಧ ಮಾನವ ದೇಹದಲ್ಲಿ ರೋಗನಿರೋಧಕ ಶಕ್ತಿ ವರ್ಧಿಸುವ ಚಿಕಿತ್ಸೆಯನ್ನು ಸಂಶೋಧಿಸಿದ್ದರು.
ಪ್ರಶಸ್ತಿ ಮೊತ್ತ 7.39 ಕೋಟಿ ರೂ.ಗಳನ್ನು ಇಬ್ಬರು ವಿಜ್ಞಾನಿಗಳು ಜಂಟಿಯಾಗಿ ಹಂಚಿಕೊಳ್ಳಲಿದ್ದಾರೆ.
ಕ್ರಾಂತಿಕಾರಿ ಸಂಶೋಧನೆ: ಅಲಿಸನ್ ಹಾಗೂ ಹೊಂಜೋ ಅವರ ಸಂಶೋಧನೆಯ ಈ ಚಿಕಿತ್ಸಾ ವಿಧಾನ ಕ್ಯಾನ್ಸರ್ ವಿರುದ್ಧ ಕ್ರಾಂತಿಕಾರಕ ಪರಿಣಾಮ ಬೀರಲಿದೆ. 1990ರಲ್ಲಿ ಅಲಿಸನ್ ಹಾಗೂ 1992ರಲ್ಲಿ ಹೊಂಜೋ ಅವರು ಪ್ರತ್ಯೇಕವಾಗಿ ಸಂಶೋಧನೆ ಆರಂಭಿಸಿದ್ದರು. ಅವರ ಸಂಶೋಧನೆಯ ಚಿಕಿತ್ಸೆ ದೇಹದಲ್ಲಿ ಕ್ಯಾನ್ಸರ್ ಕಾರಕ ಅಂಶಗಳನ್ನು ಏರಿಸುವ ಕಣಗಳನ್ನು ನಿಯಂತ್ರಣದಲ್ಲಿಡುತ್ತದೆ. ಜತೆಗೆ ರೋಗನಿರೋಧಕಶಕ್ತಿಯನ್ನು ಕೂಡ ವೃದ್ಧಿಸುತ್ತದೆ. ಈ ಇಬ್ಬರು ವಿಜ್ಞಾನಿಗಳ ಸಂಶೋಧನೆಯು ಆಧುನಿಕ ವೈದ್ಯಕೀಯ ವಿಜ್ಞಾನಕ್ಕೆ ಬುನಾದಿಯಾಗಿದೆ. ಈ ಸಂಶೋಧನೆ ಆಧರಿಸಿ ಆಧುನಿಕ ಸುಧಾರಿತ ಚಿಕಿತ್ಸಾ ಕ್ರಮಗಳು ನಡೆಯುತ್ತಿವೆ. ಇದಕ್ಕೆ ಚೆಕ್ಪಾಯಿಂಟ್ ಥೆರಪಿ ಅಥವಾ ಚೆಕ್ಪಾಯಿಂಟ್ ಇನ್ಹಿಬಿಟರ್ಸ್ ಎಂದು ಕರೆಯಲಾಗುತ್ತದೆ.
ಈ ವಾರಪೂರ್ತಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ನೊಬೆಲ್ ಪ್ರಶಸ್ತಿ ಘೋಷಣೆಯಾಗಲಿದೆ. ಮೊದಲ ಹಂತವಾಗಿ ವೈದ್ಯ ಕ್ಷೇತ್ರದಲ್ಲಿ ಘೋಷಿಸಲಾಗಿದೆ.
ಜೇಮ್್ಸ ಅಲಿಸನ್: 70 ವರ್ಷದ ಅಲಿಸನ್ ಅವರು ಅಮೆರಿಕದ ಎಂ.ಡಿ. ಆಂಡರ್ಸನ್ ಕ್ಯಾನ್ಸರ್ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ಕಳೆದ 4 ದಶಕಗಳಿಂದ ಕ್ಯಾನ್ಸರ್ ವಿರುದ್ಧ ರೋಗನಿರೋ ಧಕ ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.
ತಸುಕು ಹೊಂಜೋ: 76 ವರ್ಷದ ಹೊಂಜೋ ಅವರು ಜಪಾನ್ನ ಕ್ಯೋಟೊ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಪ್ರಶಸ್ತಿಯು ನನ್ನ ಸಂಶೋಧನೆಗೆ ಇನ್ನಷ್ಟು ಪ್ರೇರಣೆ ನೀಡಿದೆ. ಮನುಷ್ಯನ ಜೀವ ಉಳಿಸುವ ಕಾರ್ಯದಲ್ಲಿ ಸಂಶೋಧನೆ ಮುಂದುವರಿಸುತ್ತೇನೆ.
| ಜೇಮ್್ಸ ಅಲಿಸನ್
ಚೆಕ್ಪಾಯಿಂಟ್ ಥೆರಪಿಗೆ ಸಂಬಂಧಿಸಿದ ಸುಧಾರಿತ ಸಂಶೋಧನೆ ಮಾಡುವುದು ನನ್ನ ಗುರಿ. ಈ ಮೂಲಕ ಇನ್ನಷ್ಟು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಸಿಗುವಂತಾಗಬೇಕು.
| ತಸುಕು ಹೊಂಜೋ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ