ವಿಷಯಕ್ಕೆ ಹೋಗಿ

ಜ್ಞಾನ ಕಾರಂಜಿ ‍ ಅಶ್ವಿನಿ ನಾಚಪ್ಪ ಬರ್ತಡೇ ಆರ್ಟಿಕಲ್

ಅಶ್ವಿನಿ ನಾಚಪ್ಪ

ಭಾರತದ ಫ್ಲೋರೆನ್ಸ್ ಗ್ರಿಫಿತ್ ಜೋಯ್ನರ್ ಎಂದು ಪ್ರಸಿದ್ಧಿ ಪಡೆದ ಭಾರತದ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರು ಜನಿಸಿದ ದಿನ ಅಕ್ಟೋಬರ್ 21, 1967.  ಕೊಡಗಿನ ಬೆಡಗಿ ಅಶ್ವಿನಿಯವರಿಗೆ ಗಗನ ಸಖಿಯಾಗಬೇಕು ಎನ್ನುವುದು  ಮೊದಲ ಕನಸಾಗಿತ್ತು. ಆದರೆ ಕಂಠೀರವ ಕ್ರೀಡಾಂಗಣದ ಬಳಿಯೇ ಇದ್ದ ಮನೆ, ಒಬ್ಬ ಖ್ಯಾತ ಅಥ್ಲೀಟ್ ಹೊರಹೊಮ್ಮಲು ನೆರವಾಯಿತು. ನಂತರ ನಡೆದದ್ದೆಲ್ಲ ಇತಿಹಾಸ. ಭಾರತೀಯ ಅಥ್ಲೆಟಿಕ್ ಲೋಕದಲ್ಲಿ ಸಾಕಷ್ಟು ಸಾಧಿಸಿ ಹೊರ ಬಂದ ಮೇಲೆ,  ಕೆಲವು ಕಾಲ ಸಿನಿಮಾ ಹಾಗೂ  ಇತ್ತೀಚಿನ ವರ್ಷಗಳಲ್ಲಿ  ಕ್ರೀಡಾ ಅಕಾಡೆಮಿ, ಶಿಕ್ಷಣ ಕ್ಷೇತ್ರ,  ಸಮಾಜಸೇವೆ ಹೀಗೆ ಅಶ್ವಿನಿ ನಾಚಪ್ಪ ನಿರಂತರ ಕ್ರಿಯಾಶೀಲರಾಗಿ ಮುಂದುವರೆದಿದ್ದಾರೆ.   ಇದು ಒಲಿಂಪಿಕ್ಸ್ ಕ್ರೀಡಾಕೂಟಲ್ಲಿ ಭಾರತವನ್ನು ಪ್ರತಿನಿಧಿಸಿದ್ದ, 'ಪಯ್ಯೋಳಿ ಎಕ್ಸ್‌ಪ್ರೆಸ್' ಪಿ.ಟಿ. ಉಷಾ ಅವರನ್ನೇ ಎರಡು ಬಾರಿ ಮಣಿಸಿದ್ದ, ಕೊಡಗಿನ ಬೆಡಗಿ, ಸೊಗಸುಗಾತಿ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರ ಚುಟುಕಾದ ಜೀವನಗಾಥೆ.

ಆರಂಭದ ದಿನಗಳಲ್ಲಿ ಕೋಚ್ ಮೊಹಿಂದರ್ ಸಿಂಗ್ ನೀಡುತ್ತಿದ್ದ ಸಿಹಿ ತಿಂಡಿಯ ಆಸೆಗಾಗಿಯೇ ಕಂಠೀರವ ಕ್ರೀಡಾಂಗಣದ ಟ್ರ್ಯಾಕ್ ಮೇಲೆ ಒಂದಾದ ಮೇಲೆ ಒಂದು ಸುತ್ತು ಹೊಡೆಯಲಾರಂಭಿಸಿದ ಅಶ್ವಿನಿ ಅವರ  ಜೊತೆ ಅಂದಿನ ದಿನಗಳಲ್ಲಿ  ಅವರ ಅಕ್ಕ ಪುಷ್ಪಾ ಕೂಡ ಇರುತ್ತಿದ್ದರು. ಕ್ರಮೇಣ ಸಿಹಿ ತಿಂಡಿಯ ಜೊತೆ ಪದಕ-ಪ್ರಶಸ್ತಿ-ಪುರಸ್ಕಾರಗಳೂ ಬರಲಾರಂಭಿಸಿದವು. ಹೀಗೆ ಅಥ್ಲೆಟಿಕ್ ಲೋಕದಲ್ಲಿ ಓಡಲಾರಂಭಿಸಿದ ಅಶ್ವಿನಿ 1991ರಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪಿ.ಟಿ.ಉಷಾ ಅವರನ್ನು ಮೀರಿಸಿ ಸ್ವರ್ಣ ಗೆದ್ದರು. ಆ ಮೂಲಕ ಮನೆಮಾತಾದ ಅಶ್ವಿನಿ, 1988ರ ಸಿಯೋಲ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಮಹಿಳೆಯರ ರಿಲೆ ತಂಡದ ಸದಸ್ಯೆಯಾಗಿದ್ದರು. ನಂತರ ಸಿನಿಮಾ ರಂಗಕ್ಕೆ ಲಗ್ಗೆಯಿಟ್ಟ ಈ ಚೆಲುವೆ ಟೀಕಾಕಾರರ ಪ್ರಕಾರ ಮುಗಿದು ಹೋದ ಅಧ್ಯಾಯವಾಗಿದ್ದರು. ಆದರೆ, 1992ರಲ್ಲಿ ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ ನಾಲ್ಕು ಸ್ವರ್ಣ ಬಾಚಿಕೊಂಡ ಅಶ್ವಿನಿ ಎಲ್ಲರ ಬಾಯಿ ಮುಚ್ಚಿಸಿದರು.

ಕೊನೆಗೆ ಗಾಯಾಳುವಾದ ಕಾರಣ ಟ್ರ್ಯಾಕ್‌ನಿಂದ ದೂರ ಸರಿದ ನಂತರದಲ್ಲಿ ಅವರು ಹಲವಾರು ದಕ್ಷಿಣ ಭಾಷೀಯ ಚಲನಚಿತ್ರಗಳಲ್ಲಿ ನಟಿಸಿ ಅಲ್ಲೂ ಹಲವಾರು ಪ್ರಶಸ್ತಿಗಳನ್ನು ಗಳಿಸಿದರು.  ಯಶಸ್ಸು ತಮ್ಮೊಂದಿರುವಾಗಲೇ ಅದಕ್ಕೂ ಗುಡ್ ಬೈ ಹೇಳಿ ಅವರು ಪತಿಯೊಡನೆ ಸೇರಿ ಕರುಂಬಯ್ಯ ಕ್ರೀಡಾ ಅಕಾಡೆಮಿ ಸ್ಥಾಪಿಸಿದರು.  ಆ ಮೂಲಕ ಹಲವು ಕ್ರೀಡಾ ಪಟುಗಳು ಬೆಳಕಿಗೆ ಬರುವಂತೆ ಮಾಡುತ್ತಿದ್ದಾರೆ.  ಜೊತೆಗೆ ಪರಿಕ್ರಮ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ಕೂಡ ನಿರತರಾಗಿದ್ದಾರೆ.  ‘ಪರಿಕ್ರಮ’ ಸಂಸ್ಥೆ  ಕೊಳಗೇರಿಯ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸುಂದರ ದಕ್ಷಿಣ ಕೊಡಗಿನ ಪರಿಸರದಲ್ಲಿ ಐಸಿಎಸ್ಇ ಶಿಕ್ಷಣ ನೀಡುವ ಶಾಲೆಯನ್ನು ಕೂಡ ನಡೆಸುತ್ತಿದ್ದಾರೆ.  ಜೊತೆಗೆ ಹಲವು ಕ್ರೀಡಾಸಕ್ತ ಸಂಘಟನೆಗಳೊಂದಿಗೆ ನಿರಂತರವಾಗಿ ಕಾರ್ಯನಿರತರಾಗಿದ್ದು, ತಮ್ಮನ್ನು ಬೆಳೆಸಿದ ಕ್ರೀಡಾ ಕ್ಷೇತ್ರಕ್ಕೆ ಹತ್ತು ಹಲವು ರೀತಿಯಲ್ಲಿ ಪೋಷಕತ್ವ ವಹಿಸಿದ್ದಾರೆ.  ಅಶ್ವಿನಿ ಪುತ್ರಿಯರಾದ ಅನೀಷಾ ಮತ್ತು ದೀಪಾಲಿ ಇಬ್ಬರೂ ಬ್ಯಾಡ್ಮಿಂಟನ್ ಆಟಗಾರ್ತಿಯರು.

ಅಶ್ವಿನಿ ನಾಚಪ್ಪ ಅವರಿಗೆ ಹಲವಾರು ಪ್ರಶಸ್ತಿಗಳು ದೊರಕಿದ್ದು, 1990ರಲ್ಲಿ ಅರ್ಜುನ ಪ್ರಶಸ್ತಿ ಸಹಾ ಪಡೆದಿದ್ದಾರೆ. ನಮ್ಮ ಕನ್ನಡ ನಾಡಿನ ವಿಶಿಷ್ಟ ಸಾಧಕಿಯಾದ ಅಶ್ವಿನಿ ನಾಚಪ್ಪ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಜುಲೈ 1ರಿಂದ ಬೆಂಗಳೂರು ವಿಜ್ಞಾನೋತ್ಸವ

41 ವರ್ಷಗಳಿಂದ ಒಮ್ಮೆಯೂ ತಪ್ಪದಂತೆ, ವ್ರತದಂತೆ ನಡೆದುಕೊಂಡು ಬಂದಿರುವ ಬೆಂಗಳೂರು ವಿಜ್ಞಾನೋತ್ಸವ ಜುಲೈ ಒಂದರಿಂದ ಆಗಸ್ಟ್ 2ರವರೆಗೂ ನಡೆಯಲಿದೆ. ಭಾರತೀಯ ಕ್ಷಿಪಣಿ ಕ್ಷೇತ್ರದಲ್ಲಿ ಮಿಸೈಲ್ ವುಮನ್ (ಅಗ್ನಿ ಕನ್ಯೆ!) ಎಂದೇ ಖ್ಯಾತರಾಗಿರುವ ಡಾ.ಟೆಸ್ಸಿ ಥಾಮಸ್ ‘ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿ’ ಕುರಿತು ಉಪನ್ಯಾಸ ನೀಡಲಿರುವುದು ಉತ್ಸವದ ವಿಶೇಷಗಳಲ್ಲಿ ಒಂದು. ಕೇರಳದ ತುಂಬಾ ಉಡಾವಣಾ ಕೇಂದ್ರದ ಸಮೀಪದಲ್ಲೇ ಹುಟ್ಟಿ ರಾಕೆಟ್ ಉಡಾವಣೆಯನ್ನು ನೋಡನೋಡುತ್ತ, ಒಂದಲ್ಲ ಒಂದು ದಿವಸ ಅಲ್ಲೇ ಉದ್ಯೋಗಿಯಾಗುವ ಕನಸು ಕಾಣುತ್ತ ಭವಿಷ್ಯದಲ್ಲಿ ನನಸಾಗಿಸಿಕೊಂಡ ಹಿರಿಮೆ ಹೆಮ್ಮೆ ಟೆಸ್ಸಿಯವರದು. ‘ಅಗ್ನಿ-4’ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಸಾಮರ್ಥ್ಯ ಮೆರೆದ ಟೆಸ್ಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ನಿ ಕನ್ಯೆ ಎಂದೇ ಹೆಸರಾದವರು. ಇವರ ಸಾಮರ್ಥ್ಯ ಬೆಳಕಿಗೆ ಕಾರಣರಾದವರು ಎ.ಪಿ.ಜೆ. ಅಬ್ದುಲ್ ಕಲಾಂ! ಜುಲೈ 21ರಂದು ಟೆಸ್ಸಿ ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನೋತ್ಸವಕ್ಕೆ ವೇದಿಕೆ ಕಲ್ಪಿಸಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಗೀಗ 100ರ ಸಂಭ್ರಮ, ಅದೇ ರೀತಿ ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿಯನ್ನೂ ಈ ಶಿಕ್ಷಣ ಸಂಸ್ಥೆ ಈಗಾಗಲೇ ಆರಂಭಿಸಿದೆ. ಹಾಗಾಗಿ ಈ ಸಲದ ವಿಜ್ಞಾನೋತ್ಸವ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುವುದು ನ್ಯಾಷನಲ್ ಎಜುಕೇಷನ್ ಸೊಸೈಟಿಯ ಹಾಲಿ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅನಿಸಿಕೆ. ಉದ್ಘಾಟನಾ ಉಪನ್ಯಾಸದ ವಸ್ತು ...

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ಕೇಂದ್ರದಿಂದ ಶೀಘ್ರ 3 ಹೊಸ ಕೃಷಿ ಯೋಜನೆ

ನವದೆಹಲಿ: ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಬೆನ್ನಿಗೆ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಮತ್ತಷ್ಟು ನೂತನ ನೀತಿಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತೆಗೆದುಹಾಕುವ ಮೂರು ಹೊಸ ಸಂಗ್ರಹಣೆ ಯೋಜನೆಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎನ್ನಲಾಗಿದೆ. ದರ ಕೊರತೆ ಯೋಜನೆ : ಸರ್ಕಾರಿ ಮಂಡಿಗಳಲ್ಲಿ ಬೆಳೆಗಳ ಮಾರುಕಟ್ಟೆ ದರ, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ ಸರ್ಕಾರದ ಕಡೆಯಿಂದ ರೈತರಿಗೆ ಪರಿಹಾರ ವಿತರಣೆ. ಮಾರುಕಟ್ಟೆ ಖಾತ್ರಿ ಯೋಜನೆ: ಕೇಂದ್ರದ ಅನುಮತಿ ರಹಿತವಾಗಿ ನಿರ್ದಿಷ್ಟ ಬೆಳೆಗಳನ್ನು ನೇರವಾಗಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ. ಆಯಾ ರಾಜ್ಯಗಳಲ್ಲಿನ ಬೆಳೆಗಳ ಬೇಡಿಕೆಗೆ ತಕ್ಕಂತೆ ಖರೀದಿ ಪ್ರಮಾಣ ನಿಗದಿಪಡಿಸಲು ಸ್ವಾತಂತ್ರ್ಯ. ಖಾಸಗಿ ಸಂಗ್ರಹಣೆ ಯೋಜನೆ: ಖಾಸಗಿ ಖರೀದಿದಾರರಿಗೆ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರದಿಂದ ಪ್ರೋತ್ಸಾಹ.