ಮೇಡ್ ಇನ್ ಇಂಡಿಯಾ ಯೋಜನೆಯಲ್ಲಿ ತಯಾರಾಗಿರುವ ದೇಶದ ಮೊದಲ ಇಂಜಿನ್ರಹಿತ ರೈಲು (ಮೆಟ್ರೋ ಮಾದರಿ) ‘ಟ್ರೇನ್ 18’ ಸಿದ್ಧವಾಗಿದ್ದು, ಈ ಮಾಸಾಂತ್ಯಕ್ಕೆ ಪರೀಕ್ಷಾರ್ಥ ಸಂಚಾರ ನಡೆಸಲಿದೆ. ದೇಶದಲ್ಲಿ ಸಂಚರಿಸುತ್ತಿರುವ ಎಲ್ಲ ಶತಾಬ್ದಿ ರೈಲುಗಳನ್ನು ಟ್ರೇನ್ 18 ರೈಲಾಗಿ ಬದಲಾಯಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದ್ದು, ಅದರಂತೆ ಬೆಂಗಳೂರು-ಚೆನ್ನೈ ಮಾರ್ಗದ ಶತಾಬ್ದಿ ರೈಲು ಕೂಡ ಇಂಜಿನ್ರಹಿತವಾಗಿ ಕಾರ್ಯಾಚರಣೆಗೆ ಇಳಿಯಲಿದೆ.
3 ದಶಕಗಳ ಕಾಲ ಕಾರ್ಯ ನಿರ್ವಹಿಸಿರುವ ಶತಾಬ್ದಿ ರೈಲುಗಳ ಬದಲಾಗಿ ಅತ್ಯಾಧುನಿಕ, ಆಕರ್ಷಕ ಟ್ರೇನ್ 18 ಹಳಿಗಿಳಿಸುವುದರ ಕುರಿತು ಭಾರತೀಯ ರೈಲ್ವೆ ಇಲಾಖೆ ಈ ಹಿಂದೆ ಘೋಷಣೆ ಮಾಡಿತ್ತು. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಮೊದಲ ಟ್ರೇನ್ 18 ಸಿದ್ಧವಾಗಿದ್ದು, ಮಾಸಾಂತ್ಯಕ್ಕೆ ಇದರ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ. ಜನವರಿಯಲ್ಲಿ ದೆಹಲಿ-ಭೋಪಾಲ್ ಮಾರ್ಗದ ನಡುವೆ ಈ ರೈಲು ಉದ್ಘಾಟನೆಯಾಗುವ ನಿರೀಕ್ಷೆ ಇದೆ.
ಬೆಂಗಳೂರು ರೈಲುಗಳೂ ಇಂಜಿನ್ಲೆಸ್: ಮುಂದಿನ ದಿನಗಳಲ್ಲಿ ನೈಋತ್ಯ ರೈಲ್ವೆಯ ಬೆಂಗಳೂರು-ಚೆನ್ನೈ ಶತಾಬ್ದಿ, ದಕ್ಷಿಣ ರೈಲ್ವೆಯ ಮೈಸೂರು-ಚೆನ್ನೈ ಶತಾಬ್ದಿ ಬದಲಾಗಿ ಟ್ರೇನ್ 18 ಹಳಿಗಿಳಿಯಲಿದೆ ಎಂದು ನೈಋತ್ಯ ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಈ ರೈಲು ಚಾಲನೆಗೆ ಲೋಕೋಪೈಲೆಟ್ಗಳಿಗೆ ಪ್ರತ್ಯೇಕ ತರಬೇತಿ ಅಗತ್ಯವಿದ್ದು, ರೈಲು ವಾಣಿಜ್ಯ ಸಂಚಾರಕ್ಕೂ ಮುನ್ನ ರೈಲ್ವೆ ಸುರಕ್ಷತಾ ಆಯುಕ್ತರಿಂದ ಒಪ್ಪಿಗೆ ಪಡೆಯಬೇಕಾಗಿದೆ. ಹೀಗಾಗಿ 2020-21ರಲ್ಲಿ ಮತ್ತಷ್ಟು ಟ್ರೇನ್ 18 ಹಳಿಗಿಳಿಯುವ ನಿರೀಕ್ಷೆ ಇದೆ.
160 ಕಿ.ಮೀ ವೇಗ!
ಸಾಮಾನ್ಯ ರೈಲುಗಳಲ್ಲಿ ಬೋಗಿಗಳನ್ನು ಇಂಜಿನ್ ಎಳೆದೊಯ್ಯುತ್ತದೆ. ಆದರೆ ಟ್ರೇನ್ 18ನಲ್ಲಿ ಪ್ರತ್ಯೇಕ ಇಂಜಿನ್ ಇರುವುದಿಲ್ಲ. ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಇಂಜಿನ್ ಇರಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಂಡಿರುವ ಈ ರೈಲಿನ ವಿನ್ಯಾಸ ಬುಲೆಟ್ ಟ್ರೇನ್ ಮಾದರಿ ಯಲ್ಲಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಶತಾಬ್ದಿಗಿಂತ ಟ್ರೇನ್ 18 ವೇಗ ಹೆಚ್ಚಿರಲಿದ್ದು, ನಿರ್ವಹಣೆ ವೆಚ್ಚವೂ ಕಡಿಮೆ ಎನ್ನಲಾಗಿದೆ.
ಸ್ಟೇನ್ಲೆಸ್ ಸ್ಟೀಲ್ ಬೋಗಿ
ಟ್ರೇನ್ 18ನ ಬೋಗಿಗಳನ್ನು ಸ್ಟೇನ್ಲೆಸ್ ಸ್ಟೀಲ್ನಿಂದ ನಿರ್ವಿುಸಲಾಗಿದೆ. ಇದರಲ್ಲಿ ಒಟ್ಟು 16 ಬೋಗಿಗಳಿರಲಿದ್ದು, ಎಲ್ಲವೂ ಹವಾನಿಯಂತ್ರಿತ ಆಗಿರಲಿವೆ. ಪ್ರತಿ ಬೋಗಿಯಲ್ಲಿ 56 ರಿಂದ 78 ಪ್ರಯಾಣಿಕರು ಪ್ರಯಾಣಿಸಬಹುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ