ಭಾರತೀಯ ಮೂಲದ ಗೀತಾ ಗೋಪಿನಾಥ್ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ನೇಮಕವಾಗಿದ್ದಾರೆ. ವರ್ಷಾಂತ್ಯದಲ್ಲಿ ನಿವೃತ್ತರಾಗಲಿರುವ ಮೌರೀಸ್ ಆಬ್ಸ್ಫೆಲ್ಟ್ ಅವರಿಂದ ತೆರವಾಗಲಿ ರುವ ಸ್ಥಾನವನ್ನು ಇವರು ತುಂಬಲಿದ್ದಾರೆ. ಸದ್ಯ ಹಾರ್ವರ್ಡ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅಧ್ಯಯನ ಮತ್ತು ಆರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಗೀತಾ ಗೋಪಿನಾಥ್ ವಿಶ್ವದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದಾರೆ. ಬೌದ್ಧಿಕ ನಾಯಕತ್ವದ ಗುಣ ಹಾಗೂ ಅನುಭವ ಹೊಂದಿರುವ ಗೀತಾರನ್ನು ಐಎಂಎಫ್ಗೆ ನೇಮಿಸಲು ಹರ್ಷವಾಗುತ್ತಿದೆ ಎಂದು ಐಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಕ್ರೀಸ್ಟೀನ್ ಲಗ್ಗಾರ್ಡೆ ಹೇಳಿದ್ದಾರೆ. ಗೀತಾ ಗೋಪಿನಾಥ್ 1971ರ ಡಿಸೆಂಬರ್ 8ರಂದು ಕೋಲ್ಕತದಲ್ಲಿ ಜನಿಸಿದರು. ಅರ್ಥಶಾಸ್ತ್ರ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಅವರಿಗೆ ಮೈಸೂರಿನ ಮೈರಾ ಸ್ಕೂಲ್ ಆಫ್ ಬಿಜಿನೆಸ್ನ ಮಹಿಳಾ ಸಾಧಕಿಯರ ಹಾಲ್ ಆಫ್ ಫೇಮ್ ಗೌರವ ಸಂದಾಯವಾಗಿದೆ.
41 ವರ್ಷಗಳಿಂದ ಒಮ್ಮೆಯೂ ತಪ್ಪದಂತೆ, ವ್ರತದಂತೆ ನಡೆದುಕೊಂಡು ಬಂದಿರುವ ಬೆಂಗಳೂರು ವಿಜ್ಞಾನೋತ್ಸವ ಜುಲೈ ಒಂದರಿಂದ ಆಗಸ್ಟ್ 2ರವರೆಗೂ ನಡೆಯಲಿದೆ. ಭಾರತೀಯ ಕ್ಷಿಪಣಿ ಕ್ಷೇತ್ರದಲ್ಲಿ ಮಿಸೈಲ್ ವುಮನ್ (ಅಗ್ನಿ ಕನ್ಯೆ!) ಎಂದೇ ಖ್ಯಾತರಾಗಿರುವ ಡಾ.ಟೆಸ್ಸಿ ಥಾಮಸ್ ‘ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿ’ ಕುರಿತು ಉಪನ್ಯಾಸ ನೀಡಲಿರುವುದು ಉತ್ಸವದ ವಿಶೇಷಗಳಲ್ಲಿ ಒಂದು. ಕೇರಳದ ತುಂಬಾ ಉಡಾವಣಾ ಕೇಂದ್ರದ ಸಮೀಪದಲ್ಲೇ ಹುಟ್ಟಿ ರಾಕೆಟ್ ಉಡಾವಣೆಯನ್ನು ನೋಡನೋಡುತ್ತ, ಒಂದಲ್ಲ ಒಂದು ದಿವಸ ಅಲ್ಲೇ ಉದ್ಯೋಗಿಯಾಗುವ ಕನಸು ಕಾಣುತ್ತ ಭವಿಷ್ಯದಲ್ಲಿ ನನಸಾಗಿಸಿಕೊಂಡ ಹಿರಿಮೆ ಹೆಮ್ಮೆ ಟೆಸ್ಸಿಯವರದು. ‘ಅಗ್ನಿ-4’ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಸಾಮರ್ಥ್ಯ ಮೆರೆದ ಟೆಸ್ಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ನಿ ಕನ್ಯೆ ಎಂದೇ ಹೆಸರಾದವರು. ಇವರ ಸಾಮರ್ಥ್ಯ ಬೆಳಕಿಗೆ ಕಾರಣರಾದವರು ಎ.ಪಿ.ಜೆ. ಅಬ್ದುಲ್ ಕಲಾಂ! ಜುಲೈ 21ರಂದು ಟೆಸ್ಸಿ ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನೋತ್ಸವಕ್ಕೆ ವೇದಿಕೆ ಕಲ್ಪಿಸಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಗೀಗ 100ರ ಸಂಭ್ರಮ, ಅದೇ ರೀತಿ ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿಯನ್ನೂ ಈ ಶಿಕ್ಷಣ ಸಂಸ್ಥೆ ಈಗಾಗಲೇ ಆರಂಭಿಸಿದೆ. ಹಾಗಾಗಿ ಈ ಸಲದ ವಿಜ್ಞಾನೋತ್ಸವ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುವುದು ನ್ಯಾಷನಲ್ ಎಜುಕೇಷನ್ ಸೊಸೈಟಿಯ ಹಾಲಿ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅನಿಸಿಕೆ. ಉದ್ಘಾಟನಾ ಉಪನ್ಯಾಸದ ವಸ್ತು ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ