ನವದೆಹಲಿ: ದೇಶದಾದ್ಯಂತ ಇಂಧನ ದರಗಳು ಇಳಿಕೆ ಹಾದಿಯಲ್ಲಿವೆ. ಭಾನುವಾರ ಪೆಟ್ರೋಲ್, ಡೀಸೆಲ್ ದರಗಳು ಕ್ರಮವಾಗಿ 40 ಪೈಸೆ ಮತ್ತು 33 ಪೈಸೆಯಷ್ಟು ಇಳಿಕೆಯಾಗಿವೆ.
ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ₹ 80.67 ಹಾಗೂ ಡೀಸೆಲ್ ₹ 74.43 ರಂತೆ ಮಾರಾಟವಾಯಿತು. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹ 80.05, ಡೀಸೆಲ್ ₹ 74.05ರಷ್ಟಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗುತ್ತಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತ 11ನೇ ದಿನವೂ ಇಂಧನ ದರಗಳನ್ನು ತಗ್ಗಿಸಿವೆ.
ಅಕ್ಟೋಬರ್ 18 ರಿಂದ 28ರವರೆಗೆ ಪೆಟ್ರೋಲ್ ಲೀಟರಿಗೆ ₹ 2.78 ಹಾಗೂ ಡೀಸೆಲ್ ಲೀಟರಿಗೆ1.64ರಷ್ಟು ಇಳಿಕೆಯಾಗಿವೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ