ಲೋಕಸಭೆ ಚುನಾವಣೆ (2019) ವೇಳೆ ಸಾಮಾಜಿಕ ಜಾಲತಾಣ ಫೇಸ್ಬುಕ್ ದುರ್ಬಳಕೆಯಾಗದಂತೆ ವಿಶೇಷ ಕಾರ್ಯಪಡೆ ರಚಿಸುವುದಾಗಿ ಫೇಸ್ಬುಕ್ನ ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ವಿಭಾಗದ ಉಪಾಧ್ಯಕ್ಷ ರಿಚರ್ಡ್ ಆಲನ್ ತಿಳಿಸಿದ್ದಾರೆ. ಕಾರ್ಯಪಡೆಯಲ್ಲಿ 100 ಸದಸ್ಯರು ಇರಲಿದ್ದಾರೆ. ಅಂತರ್ಜಾಲ ಭದ್ರತೆ, ಹ್ಯಾಕ್ ನಿಯಂತ್ರಣ, ಖಾಸಗಿ ಮಾಹಿತಿಗೆ ಕನ್ನ ಹಾಕುವುದಕ್ಕೆ ನಿರ್ಬಂಧ ಸೇರಿದಂತೆ ಅನೇಕ ವಿಷಯಗಳಲ್ಲಿನ ಪರಿಣಿತರು ಕಾರ್ಯಪಡೆಯಲ್ಲಿ ಬಳಕೆದಾರರ ಮೇಲೆ ನಿಗಾ ಇರಿಸಲಿದ್ದಾರೆ. ರಾಜಕೀಯ ಪಕ್ಷಗಳ ಐಟಿ ಸೆಲ್ ಹಾಗೂ ಮುಖಂಡರೊಂದಿಗೆ ಹಲವು ಸಭೆಗಳನ್ನು ನಡೆಸಿ ಕಾರ್ಯಪಡೆ ಸದಸ್ಯರು ವದಂತಿಗಳನ್ನು ಹರಡದಂತೆ ತಡೆಯಲಿದ್ದಾರೆ ಎಂದು ಆಲನ್ ವಿವರಿಸಿದ್ದಾರೆ.
ಡಿಲೀಟ್ಗೆ 30 ದಿನ: ಬಳಕೆದಾರರು ಫೇಸ್ಬುಕ್ ಖಾತೆ ಯನ್ನು ಡಿಲೀಟ್ ಮಾಡಲು ಬಯಸಿದರೆ 30 ದಿನಗಳ ಹೆಚ್ಚುವರಿ ಅವಧಿಯನ್ನು ಕಂಪನಿ ನೀಡಲಿದೆ. ಪ್ರಸ್ತುತ 14 ದಿನ ಕಾಲಾವಕಾಶವನ್ನು ಫೇಸ್ಬುಕ್ ನೀಡುತ್ತಿದೆ. ಹಲವು ಬಳಕೆದಾರರು ಡಿಲೀಟ್ಗೆ ಸೂಚನೆ ನೀಡಿ, 14 ದಿನಗಳ ಬಳಿಕ ಮತ್ತೆ ತಮ್ಮ ಖಾತೆಯಲ್ಲಿ ಲಾಗಿನ್ ಆಗಲು ಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಖಾತೆ ನೀಡುವಂತೆ ಮನವಿ ಕೂಡ ಮಾಡುತ್ತಿದ್ದಾರೆ. ಹಾಗಾಗಿ ಖಾತೆ ಡಿಲೀಟ್ ಅವಧಿಯನ್ನು 30 ದಿನಗಳಿಗೆ ಹೆಚ್ಚಿಸಲಾಗಿದೆ . ಬಳಕೆದಾರ ಖಾತೆ ಡಿಲೀಟ್ ಮಾಡಿದ ಬಳಿಕವೂ ಸರ್ವರ್ನಿಂದ ಖಾಸಗಿ ಮಾಹಿತಿಗಳು ಸಂಪೂರ್ಣ ಅಳಿಸಿ ಹೋಗಲು 90 ದಿನಗಳಾಗುತ್ತದೆ ಎಂದು ಕಂಪನಿ ಹೇಳಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ