ಶೈಕ್ಷಣಿಕ ಕ್ಷೇತ್ರಕ್ಕೆ ನೀಡಲಾಗುತ್ತಿರುವ ಅನುದಾನದಲ್ಲಿ ಭಾರತ ಜಾಗತಿಕವಾಗಿ 136ನೇ ಸ್ಥಾನದಲ್ಲಿದೆ. ಮಕ್ಕಳ ಹೋಮ್ ವರ್ಕ್ (ಮನೆಪಾಠ)ಗೆ ಪಾಲಕರು ಮೀಸಲಿಡುವ ಸಮಯದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಮೀಕ್ಷೆಯಿಂದ ತಿಳಿದುಬಂದಿದೆ.
ಆಶಾವಾದಿಗಳು
ಭಾರತದಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚುವ ಬಗ್ಗೆ ಶೇ.86 ಯುವ ಜನರು ಆಶಾವಾದಿಗಳಾಗಿದ್ದಾರೆ. ಗುಣಮಟ್ಟದ ಶಿಕ್ಷಣ ದೊರೆಯದೆ ತಮ್ಮ ಭವಿಷ್ಯದ ವಿಷಯವಾಗಿ ಶೇ.33 ಯುವಜನರು ಚಿಂತಿತರಾಗಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ.
ಕನಿಷ್ಠ ಅನುದಾನ
ಇತರ ದೇಶಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನಕ್ಕೆ ಹೋಲಿಸಿದರೆ ಭಾರತದಲ್ಲಿ ನೀಡಲಾಗುತ್ತಿರುವ ಅನುದಾನ ತೀರಾ ಕಡಿಮೆ. 2012-13ನೇ ಸಾಲಿನಲ್ಲಿ ಭಾರತದ ಒಟ್ಟಾರೆ ಜಿಡಿಪಿಯ ಶೇ.3.1 ಬಜೆಟ್ ಅನುದಾನವನ್ನು ಶಿಕ್ಷಣಕ್ಕೆ ಒದಗಿಸಲಾಗಿತ್ತು. 2014-15ನೇ ಸಾಲಿನಲ್ಲಿ ಇದು ಶೇ.2.8ಕ್ಕೆ ಕುಸಿದಿತ್ತು. 2015-16ನೇ ಸಾಲಿನಲ್ಲಿ ಇದು ಶೇ.2.4ಕ್ಕೆ ಇಳಿಕೆಯಾಗಿತ್ತು. ಆದರೆ, 2016-17 ಮತ್ತು 2017-18ನೇ ಸಾಲಿನಲ್ಲಿ ಸ್ವಲ್ಪ ಸುಧಾರಣೆ ಕಂಡು ಶೇ.2.7ಕ್ಕೆ ತಲುಪಿದೆ. 2018-19ನೇ ಸಾಲಿನಲ್ಲಿ ಈ ಕ್ಷೇತ್ರಕ್ಕೆ ಒಟ್ಟು 85 ಸಾವಿರ ಕೋಟಿ ರೂ. ಅನುದಾನ ದೊರೆತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅನುದಾನದಲ್ಲಿ 3 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ. ಆದರೆ ಮಕ್ಕಳ ಹೋಂವರ್ಕ್ ಪೂರ್ಣಗೊಳಿಸಲು ಭಾರತೀಯ ಪಾಲಕರು ವಾರಕ್ಕೆ ಸರಾಸರಿ 12 ಗಂಟೆ ಮೀಸಲಿಡುತ್ತಿದ್ದಾರೆ. ಇದು ವಿಶ್ವದಲ್ಲೇ ಅತಿ ಗರಿಷ್ಠ ಸಮಯ.
ನಾರ್ವೆ ಅತಿಹೆಚ್ಚು ಖರ್ಚು
ಶೈಕ್ಷಣಿಕ ಕ್ಷೇತ್ರಕ್ಕಾಗಿ ಬಜೆಟ್ನಲ್ಲಿ ಹೆಚ್ಚು ಖರ್ಚು ಮಾಡುವ ರಾಷ್ಟ್ರಗಳ ಪೈಕಿ ನಾರ್ವೆ ಮೊದಲ ಸ್ಥಾನದಲ್ಲಿದೆ. ವಾರ್ಷಿಕ 1.87 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ನ್ಯೂಜಿಲೆಂಡ್ ಮತ್ತು ಬ್ರಿಟನ್ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ. ಮಕ್ಕಳ ಓದಿಗೆ ಖರ್ಚು ಮಾಡುವ ವಿಷಯದಲ್ಲಿ ಹಾಂಕಾಂಗ್ ಮೊದಲ ಸ್ಥಾನ ಪಡೆದುಕೊಂಡಿದೆ. ಯುಎಇ ಮತು ಸಿಂಗಾಪುರ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ. ಭಾರತ ಈ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ