ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಶಿಶುವಿನ ಆರೈಕೆ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಸಿದ್ಧ ಮಿಥ್ಯಗಳು/ಕಟ್ಟುಕತೆಗಳು

ಒಂದು ಮಗು ಹುಟ್ಟಿದಾಗ, ಇಡೀ ಕುಟುಂಬವು ಮಗುವನ್ನು ನೋಡಿಕೊಳ್ಳಲು ಒಟ್ಟಾಗಿ ಬರುತ್ತದೆ. ಆದಾಗ್ಯೂ, ಹೊಸ ತಾಯಿಯನ್ನು ಸುತ್ತುವರೆದಿರುವ ಬಹಳಷ್ಟು ಮಿಥ್ಯಗಳು/ಕಟ್ಟುಕತೆಗಳು ಹಲವು ಬಾರಿ ಅನುಮಾನ ಮತ್ತು ಗೊಂದಲಕ್ಕೆ ಕಾರಣವಾಗುತ್ತವೆ.

ಈ ಮಿಥ್ಯಗಳು/ಕಟ್ಟುಕತೆಗಳು ಮತ್ತು ಅವುಗಳ ಹಿಂದಿನ ಸತ್ಯವನ್ನು ಇಲ್ಲಿ ನೋಡೋಣ.

ಮಿಥ್ಯ 1 - ಕ್ಲಿನಿಕಲಿ ಟೆಸ್ಟೆಡ್ ಮತ್ತು ಕ್ಲಿನಿಕಲಿ ಪ್ರೂವನ್ ಮೈಲ್ಡ್ ಉತ್ಪನ್ನಗಳು ಒಂದೇ

ಸತ್ಯ


'ಕ್ಲಿನಿಕಲ್ ಟೆಸ್ಟೆಡ್' ಒಂದು ಪ್ರಯೋಗಾಲಯದಲ್ಲಿ ನಡೆಸಿದ ಕೇವಲ ಒಂದು ವೈಜ್ಞಾನಿಕ ಪರೀಕ್ಷೆಯಾಗಿದ್ದು, ವಿಫಲವಾದರೂ ಸಹ ಯಾವುದೇ ಬ್ರ್ಯಾಂಡ್ ಅದನ್ನು ಮಾಡಿದುದಾಗಿ ಹೇಳಬಹುದು.

ನೀವು ಕ್ಲಿನಿಕಲಿ ಪ್ರೂವನ್ ಮೈಲ್ಡ್ ವಿಶಿಷ್ಟ ಗುರುತನ್ನು ಹೊಂದಿದ ಹೊಸ ಜಾನ್ಸನ್ಸ್ ಉತ್ಪನ್ನಗಳಂತಹವನ್ನು ಆರಿಸಬೇಕು ಏಕೆಂದರೆ ಅವು ಮಗುವಿನ ಚರ್ಮದ ಮೇಲೆ ಬಳಸಲು ಸುರಕ್ಷಿತವಾಗಿವೆ. ಮಗುವಿನ ಚರ್ಮದ ಮೇಲೆ ಕೆರಳಿಕೆ ಮತ್ತು ಅಲರ್ಜಿಗಳಿಗೆ ನಾಲ್ಕು ಕಟ್ಟುನಿಟ್ಟಾದ ವೈದ್ಯಕೀಯ ಪರೀಕ್ಷೆಗಳ ನಂತರ ಒಂದು ಉತ್ಪನ್ನವು 100% ಯಶಸ್ಸಿನ ಪ್ರಮಾಣದಲ್ಲಿ ಉತ್ತೀರ್ಣವಾದರೆ ಮಾತ್ರ ಕ್ಲಿನಿಕಲಿ ಪ್ರೂವನ್ ಮೈಲ್ಡ್ ಎಂದು ಸಮರ್ಥಿಸಬಹುದು.

ಮಿಥ್ಯ 2 - ಶಿಶು ಉತ್ಪನ್ನಗಳಲ್ಲಿನ ಪರಿಮಳ ಮಗುವಿಗೆ ಹಾನಿಯನ್ನುಂಟುಮಾಡಬಹುದು

ಸತ್ಯ

ಸೌಮ್ಯ ಸುಗಂಧವು ಶಿಶುಗಳಲ್ಲಿ ವಾಸನೆಯ ಗ್ರಹಿಕೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪರಿಮಳಯುಕ್ತ ಮಗುವಿನ ಆರೈಕೆ ಉತ್ಪನ್ನಗಳು ಪರಿಮಳವಿಲ್ಲದವುಗಳಿಗಿಂತ ಹೆಚ್ಚು ಉಪಯುಕ್ತವಾಗಿರುತ್ತವೆ.

ಆದಾಗ್ಯೂ, ಉತ್ಪನ್ನಗಳಲ್ಲಿ ಬಳಸಲಾದ ಸುಗಂಧಗಳು ಆಲರ್‌ಜೆನ್ಸ್ ಮುಕ್ತವಾಗಿರಬೇಕು ಮತ್ತು ಮಗುವಿನ ಚರ್ಮಕ್ಕೆ ಅದು ಕಠಿಣವೆನಿಸಬಾರದು. ನೀವು, ಉತ್ಕೃಷ್ಟ ಐಎಫ್ಆರ್‌ಎ (ಇಂಟರ್‌ನ್ಯಾಷನಲ್ ಫ್ರೇಗ್ರೆನ್ಸ್ ಅಸೋಸಿಯೇಶನ್) ಮಾನದಂಡಗಳನ್ನು ಪೂರೈಸುವ ಜಾನ್ಸನ್ಸ್‌ ಬೇಬಿ ನಂತಹ ಬ್ರಾಂಡ್‌ಗಳ ಜೆಂಟಲ್ ಫ್ರೇಗ್ರನ್ಸಸ್ ನೊಂದಿಗೆ (ಸೌಮ್ಯ ಸುಗಂಧಗಳೊಂದಿಗೆ) ಹೋಗಬೇಕು.

ಮಿಥ್ಯ 3 - ನೈಸರ್ಗಿಕ ಉತ್ಪನ್ನಗಳು ಯಾವಾಗಲೂ ಸುರಕ್ಷಿತವಾಗಿವೆ.

ಸತ್ಯ

ನೈಸರ್ಗಿಕ/ಸಾವಯವ ಶಿಶು ಉತ್ಪನ್ನಗಳಲ್ಲಿ ಸಾರಗಳ ಸ್ಥಿರ ಮಟ್ಟವನ್ನು ಕಾಯ್ದುಕೊಳ್ಳುವುದು ಸವಾಲಾಗಬಹುದು.* ಈ ಉತ್ಪನ್ನಗಳು ಯಾವುದೇ ಕ್ಲಿನಿಕಲ್ ಟೆಸ್ಟ್ ಗಳಿಗೆ ಒಳಗಾಗುವುದು ಅಗತ್ಯವಿಲ್ಲ ಮತ್ತು ಆದ್ದರಿಂದ ನಿಮ್ಮ ಮಗುವಿನ ಚರ್ಮಕ್ಕೆ ಕೆರಳಿಕೆ/ದದ್ದುಗಳನ್ನು ಉಂಟುಮಾಡಬಹುದು.

ಕಠಿಣವಾಗಿ ಪರೀಕ್ಷೆಗೊಳಪಡಿಸುವ ಮತ್ತು ಜಾಗತಿಕ ಮತ್ತು ಸ್ಥಳೀಯ ಸುರಕ್ಷತಾ ಮಾನದಂಡಗಳನ್ನು ಮೀರುವಂತಹ ಉತ್ಪನ್ನಗಳನ್ನು ಮಾತ್ರ ನೀವು ಆಯ್ಕೆ ಮಾಡಬೇಕು.

ಮಿಥ್ಯ 4 - ಸೂಕ್ಷ್ಮವಾದ ಶಿಶುವಿನ ಚರ್ಮವನ್ನು ಸ್ವಚ್ಛಗೊಳಿಸಲು ನೀರು ಸಾಕು

ಸತ್ಯ

ನೀರು ಚರ್ಮದ ಮೇಲಿನ ಕೊಳಕನ್ನು ಭಾಗಶಃ ಮಾತ್ರ ತೆಗೆದುಹಾಕಬಹುದು.

ಶಿಶುವಿನ ಸೋಪ್ ಗಳು ಶಿಶುಗಳ ಸೂಕ್ಷ್ಮ ಚರ್ಮಕ್ಕೆ ತಕ್ಕಂತೆ ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟಿರುತ್ತವೆ ಮತ್ತು ಅವು ಹೆಚ್ಚಾಗಿ ಸೌಮ್ಯವಾಗಿರುತ್ತವೆ. ವಾಸ್ತವವಾಗಿ, ಅತ್ಯುತ್ತಮ ಬೇಬಿ ಸೋಪ್ ಗಳು ಮೊಯಿಸ್ಚರೈಸಿಂಗ್ ಲೋಷನ್ ಮತ್ತು ವಿಟಮಿನ್ ಇ ಅನ್ನು ಹೊಂದಿರುತ್ತವೆ, ಇದು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುವುದರ ಜತೆಗೆ ಶಿಶುವಿನ ಚರ್ಮದ ತೇವಾಂಶವನ್ನೂ ನಿರ್ವಹಿಸುತ್ತದೆ/ಕಾಪಾಡುತ್ತವೆ.

ಹೀಗಾಗಿ, ಏನನ್ನಾದರೂ ನಂಬುವ ಮೊದಲು, ನಾವು ಹೆಚ್ಚಿನ ವಿವರಗಳಿಗಾಗಿ ನೋಡಬೇಕು ಮತ್ತು ಪ್ರಶ್ನೆಗಳನ್ನು ಕೇಳಬೇಕು, ಇದರಿಂದಾಗಿ ನೀವು ನಿಮ್ಮ ಮಗುವಿಗೆ 100% ಸೌಮ್ಯವಾದ ಆರೈಕೆಯನ್ನು ನೀಡಬಹುದು, ಮೊದಲ ದಿನದಿಂದಲೇ.#

*https://www.fda.gov/Cosmetics/ProductsIngredients/default.htm

# ಜೆಂಟಲ್ ಕೇರ್ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು, ದಯವಿಟ್ಟು www.johnsonsbaby.in ಗೆ ಲಾಗ್ ಇನ್ ಮಾಡಿ

(ಅಬಾಧ್ಯತೆ: ಇದು ನ್ಯೂ ಜಾನ್ಸನ್‌ ಪರವಾಗಿ ಟೈಮ್ಸ್‌ ಇಂಟರ್‌ನೆಟ್‌ನ ಸ್ಪಾಟ್‌ಲೈಟ್‌ ತಂಡವು ತಯಾರಿಸಿದ ಲೇಖನ)
(Disclaimer: This article has been produced on behalf of New Johnson’s by Times Internet’s Spotlight team.)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....