ರೂಪಾಯಿ ಬಲ ವರ್ಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಹೊಸ ಯತ್ನ ನಡೆಸಿದ್ದು, ತೈಲ ಕಂಪನಿಗಳು ಭಾರತೀಯ ಕರೆನ್ಸಿಯಲ್ಲಿ ಹಣ ಸ್ವೀಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಾಗತಿಕ ತೈಲ ಉತ್ಪಾದನಾ ಕಂಪನಿಗಳ ವಾರ್ಷಿಕ ಶೃಂಗಕ್ಕೂ ಮುನ್ನ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ ಪ್ರಧಾನಿ, ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿಯಲು ತೈಲ ಬೆಲೆ ಏರಿಕೆ ಕೂಡ ಕಾರಣವಾಗಿದೆ. ಜಾಗತಿಕ ಕಂಪನಿಗಳು ಅಮೆರಿಕದ ಡಾಲರ್ ಬದಲು ಆಯಾ ದೇಶಗಳ ಕರೆನ್ಸಿ ಮೂಲಕ ಹಣ ಪಡೆಯಲು ಮುಂದಾದರೆ ಭಾರತದ ಆರ್ಥಿಕತೆಗೂ ಪೂರಕವಾಗುತ್ತದೆ ಎಂದು ತಿಳಿಸಿದ್ದಾರೆ. ತೈಲ ಬೆಲೆ ಏರಿಕೆ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ತೈಲ ಆಮದು ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ತೈಲ ಉತ್ಪಾದನಾ ರಾಷ್ಟ್ರಗಳು ಭಾರತದಂಥ ಗ್ರಾಹಕರ ಬಗ್ಗೆ ಕಾಳಜಿ ತೋರಿಸಬೇಕು. ಉತ್ತಮ ಸಂಬಂಧ ವೃದ್ಧಿಗಾಗಿ ತೈಲಬೆಲೆ ಏರಿಕೆಗೆ ನಿಯಂತ್ರಣ ಹೇರಬೇಕು. ತೈಲ ಉತ್ಪಾದನಾ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ. ಭಾರತದಲ್ಲಿ ತೈಲ ಉತ್ಪಾದನೆಗೆ ಸಾಕಷ್ಟು ಅವಕಾಶಗಳಿವೆ. ಜಾಗತಿಕ ಕಂಪನಿಗಳು ಇಲ್ಲಿ ಬಂಡವಾಳ ಹೂಡಿಕೆ ಮಾಡಬೇಕು ಎಂದು ಕಂಪನಿಗಳ ಮುಖ್ಯಸ್ಥರಿಗೆ ಪ್ರಧಾನಿ ಮಾಹಿತಿ ನೀಡಿದರು.
ಸತತ 10ನೇ ದಿನ ಡೀಸೆಲ್ ಏರಿಕೆ
ನವದೆಹಲಿ: ಜನಸಾಮಾನ್ಯರ ಮೇಲಿನ ಇಂಧನ ದರ ಏರಿಕೆಯ ಹೊರೆ ಇಳಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ಗೆ 2.50 ರೂ. ಇಳಿಕೆ ಮಾಡಿತ್ತು. ಆದರೆ ಕಳೆದ 10 ದಿನಗಳಿಂದ ಡೀಸೆಲ್ ದರ ಸತತ ಏರಿಕೆ ಕಾಣುತ್ತಿದ್ದು, ಅ. 5ರಿಂದ ಇದುವರೆಗೆ 2.51 ರೂ. ಏರಿಕೆಯಾಗಿದೆ. ಸರ್ಕಾರ ಮಾಡಿದ್ದ ಸುಂಕ ಕಡಿತವನ್ನು ದರ ಏರಿಕೆ ನುಂಗಿ ಹಾಕಿದೆ. ಪೆಟ್ರೋಲ್ ಕೂಡ ಇನ್ನು ಕೆಲ ದಿನಗಳಲ್ಲಿ ಈ ಮಟ್ಟ ತಲುಪುವ ಸಾಧ್ಯತೆ ಇದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ