ಭಾರತೀಯ ನೌಕಾಪಡೆಯ ಏಕೈಕ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಎರಡನೇ ಬಾರಿ ರಿಪೇರಿ ಕಾರ್ಯ ಮುಗಿಸಿ ವಾರದೊಳಗೆ ಕಾರವಾರ ಬಂದರಿಗೆ ವಾಪಸಾಗುತ್ತಿದೆ.
ಕೊಚ್ಚಿ ಶಿಪ್ಯಾರ್ಡ್ನಿಂದ ನೌಕೆ ಹೊರಟಿದ್ದು, ಅ.30ರೊಳಗೆ ತನ್ನ ಕೇಂದ್ರ ಸ್ಥಾನವಾದ ಕಾರವಾರ ಕದಂಬ ನೌಕಾನೆಲೆ ತಲುಪುವ ಸಾಧ್ಯತೆ ಇದೆ. ನವೆಂಬರ್ ಮೊದಲ ವಾರದಲ್ಲಿ ವಿಕ್ರಮಾದಿತ್ಯ ನೌಕೆ ಗೋವಾದಲ್ಲಿ ನೌಕಾ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ.
ಮೇ 25 ರಂದು ಕೊಚ್ಚಿ ಶಿಪ್ ಯಾರ್ಡ್ಗೆ ತೆರಳಿದ್ದ ವಿಕ್ರಮಾದಿತ್ಯ ನೌಕೆಯ ಯುದ್ಧ ವಿಮಾನಗಳು ಇಳಿಯುವ ರನ್ವೇ ಸೇರಿ ಹೆಚ್ಚಿನ ಭಾಗಗಳಿಗೆ ಬಣ್ಣ ಬಳಿಯಲಾಗಿದೆ. ಇಂಜಿನ್ನ 25 ಶಾಫ್ಟ್ಗಳಲ್ಲಿ 16ನ್ನು ಬದಲಿಸಲಾಗಿದೆ. ಇನ್ನೂ ಹಲವು ನಿರ್ವಹಣಾ ಕೆಲಸಗಳನ್ನು ಮಾಡಲಾಗಿದ್ದು, ಅದರ ವೆಚ್ಚ 705 ಕೋಟಿ ರೂ. ಎಂದು ಆಂಗ್ಲ ಮಾಧ್ಯಮಗಳು ಕೊಚ್ಚಿಯಿಂದ ವರದಿ ಮಾಡಿವೆ.
ಎರಡನೇ ನಿರ್ವಹಣೆ: ರಷ್ಯಾ ಬಳಕೆ ಮಾಡಿದ್ದ ಐಎನ್ಎಸ್ ಗೋರ್ಶ್ಕೋವ್ ಎಂಬ ನೌಕೆಯನ್ನು 2.35 ಶತಕೋಟಿ ಡಾಲರ್ಗೆ ಭಾರತ ಖರೀದಿಸಿತ್ತು. 2013ರಲ್ಲಿ ಭಾರತಕ್ಕೆ ಹಸ್ತಾಂತರಗೊಂಡಿದ್ದ ಯುದ್ಧ ನೌಕೆ 2014ರ ಜನವರಿಯಲ್ಲಿ ಭಾರತ ತಲುಪಿತ್ತು. ಭಾರತಕ್ಕೆ ಬಂದ ಕೆಲವೇ ದಿನದಲ್ಲಿ ಕೊಚ್ಚಿಗೆ ಕೊಂಡೊಯ್ದು ಅದರ ನಿರ್ವಹಣೆ ಮತ್ತು ಕೆಲ ಶಸ್ತ್ರಾಸ್ತ್ರ ಜೋಡಣೆ ಕಾರ್ಯ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಕೊಚ್ಚಿ ಡ್ರೖೆ ಡಾಕ್ ವ್ಯವಸ್ಥೆಯಲ್ಲಿ ನಿರ್ವಹಣೆ ಕೈಗೊಳ್ಳಲಾಗಿದೆ. 2021 ಅಥವಾ 2022ರ ಅವಧಿಯಲ್ಲಿ ವಿಕ್ರಮಾದಿತ್ಯ ನೌಕೆಯ ನೀರಿನಡಿಯ ಭಾಗಗಳ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ನೌಕಾ ಅಧಿಕಾರಿಗಳು ತಿಳಿಸಿದ್ದಾರೆ.
1 ಸಾವಿರ ಟನ್ನ ಇಂಧನ ಸಂಗ್ರಹಾಗಾರ ಜೋಡಣಾ ಕಾರ್ಯ ಕೂಡ ಪ್ರಗತಿಯಲ್ಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ