ನವೋಮಿ ಒಸಾಕಾ ಹಾಗೂ ಪೆಟ್ರಾ ಕ್ವಿಟೋವಾ ನಡುವೆ ನಡೆದ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಹಣಾಹಣಿಯಲ್ಲಿ ನವೋಮಿ ಒಸಾಕಾ ವಿಜೇತರಾಗಿದ್ದಾರೆ. ಈ ಮೂಲಕ ಒಸಾಕಾ ಸತತ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ವಿಶ್ವ ನಂಬರ್ 1 ಸ್ಥಾನಕ್ಕೇರಿದ ಜಪಾನ್ ದೇಶದ, ಏಷ್ಯಾದ ಮೊದಲ ಟೆನ್ನಿಸ್ ಆಟಗಾರ್ತಿ ಎಂಬ ಗರಿಮೆಗೆ ಸಹ ಒಸಾಕಾ ಪಾತ್ರರಾಗಿದ್ದು ಶನಿವಾರ ನಡೆದ ಅಂತಿಮ ಹಣಾಹಣಿಯಲ್ಲಿ ಇವರು ಕ್ವಿಟೋವಾಅವರ ವಿರುದ್ಧ 7-6 (2), 5-7, 6-4 ಸೆಟ್ ಗಳ ಅಂತರದಿಂಡ ಜಯ ಸಾಧಿಸಿದ್ದಾರೆ.
ಇದಕ್ಕೆ ಹಿಂದೆ ಒಸಾಕಾ ಕಳೆದ ವರ್ಷ ಸಪ್ಟೆಂಬರ್ ನಲ್ಲಿ ನಡೆದ ಯುಎಸ್ ಓಪನ್ ಫೈನಲ್ಸ್ ನಲ್ಲಿ ಅಮೆರಿಕಾದ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.*
ಒಸಾಕಾ ಸತತ ಎರಡು ಪ್ರಮುಖ ಚಾಂಪಿಯನ್ ಶಿಪ್ ಪ್ರಶಸ್ತಿಗಳನ್ನು ಗಳಿಸಿಕಿಒಂಡಿದ್ದು ಇದರ ಮೂಲಕ ಸೆರೆನಾ ವಿಲಿಯಮ್ಸ್ ಬಳಿಕ ಈ ಬಗೆಯ ಸಾಧನೆ ಮಾಡಿದ ಎರಡನೇ ಮಹಿಳೆಯಾಗಿದ್ದಾರೆ. ಸೆರೆನಾ ಅವರು 2014-15ರಲ್ಲಿ ನಾಲ್ಕು ಅತ್ಯ್ನ್ನತ ಚಾಂಪಿಯನ್ ಟ್ರೋಫಿಗಳಲ್ಲಿ ಸತತ ಜಯ ದಾಖಲಿಸಿ ನೂತನ ದಾಖಲೆ ನಿರ್ಮಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ